Anant Vaidya

Anant Vaidya

Thursday, May 11, 2017

ಪ್ರಾಚೀನಜ್ಞಾನ



ನಂ1 ಪತ್ರಿಕೆ, ವಿಜಯವಾಣಿಯನ್ನು ಕೃತಜ್ಞತೆಯಿಂದ ಸ್ಮರಿಸಿ
ಹಿಂದಿನ ಕಾಲದಲ್ಲಿ ವಿಮಾನವಿತ್ತೇ?
ಭಾರತೀಯ ಚಿಂತಕರಿಗೆ ಬಿಡಲಾಗದ ಕೆಲವು ಹವ್ಯಾಸವಿದೆ. ಅದಕ್ಕೆ ಇನ್ನೊಬ್ಬರ ಆಡಳಿತದಲ್ಲಿ ದಬ್ಬಾಳಿಕೆಗೆ ಕಾರಣವಾದುದೂ ಆಗಿರಬಹುದು. 1] ಎಲ್ಲವನ್ನೂ ಖಂಡಿಸುವುದು. 2] ಎಲ್ಲವೂ ನಮ್ಮಲ್ಲೇ ಇದೆ ಎಂದು ಸಿದ್ಧಿಸುವುದು. 3] ತಟಸ್ಥವಾಗಿರುವುದು. 4] ಇತರರು ಹೊಗಳಿದರೆ ಮಾತ್ರ ನಮ್ಮನ್ನು ನಾವು ಗುರುತಿಸಿ ಕೊಳ್ಳುವುದು.
‘ವೇದವು ಅಪಾರವಾದ ರಹಸ್ಯಗಳ ಸುರಿಮಳೆ’ ಎಂದು ಇಂಗ್ಲೀಷರು ನಮಗೆ ಹೇಳಬೇಕಾಯಿತು. ಉಪನಿಷತ್, ಶ್ರೀಮದ್ ರಾಮಾಯಣ, ಶ್ರೀಮದ್ ಮಹಾಭಾರತ ಮತ್ತು ಅದರಲ್ಲಿ ಅಂತರ್ಗತವಾದ ಭಗವದ್ಗೀತೆ, ಎಲ್ಲವನ್ನೂ ಇಂಗ್ಲೀಷರಿಂದ ಪ್ರಭಾವಿತರಾಗಿ ನಾವು ಕಲಿಯ ಬೇಕಾಯಿತು. ಕಾಳಿದಾಸ ಮಹಾಕವಿ ಎಂದ ಮೇಲೆ ‘ಹೌದು! ಹೌದು!!’ ಎಂದು ಒಪ್ಪಿದವರು ನಾವು. ಬಹುಷ್ಯಃ ಭಾರತದ ಎಲ್ಲ ಭಾಷೆಗಳ ಪ್ರಥಮ ಶಬ್ದಕೋಶವು ಇಂಗ್ಲೀಷರಿಂದಲೇ ರಚಿತವಾಗಿರಬೇಕು. ಕನ್ನಡಕ್ಕಂತೂ ‘ಕಿಟ್ಲ’ ಮಹಾಶಯ ಪ್ರಪ್ರಥಮವಾಗಿ ಶಬ್ದಕೋಶವನ್ನು ನೀಡಿದ. ಜರ್ಮನ್‍ರು ಸಂಸ್ಕೃತ ಭಾಷೆಯ ಪೇಟೇಂಟ್ ಪಡೆದುದು ಭಾರತೀಯರ ದೌರ್ಭಾಗ್ಯ.
‘ವಿಮಾನವನ್ನು ರೈಟ್ ಸಹೋದರರೇ ತಯಾರಿಸಿದರು. ಮೊದಲು ಭಾರತದಲ್ಲಿ ಉಪಯೋಗಿಸಲ್ಪಟ್ಟ ವಿಮಾನಗಳು ಹಾಸ್ಯಾಸ್ಪದ’ ಎಂದು ಟೀಕಿಸುವಲ್ಲಿ ಒಂದು ಬೇರೆಯ ಸಂತೋಷವೇ ನಮಗಿದೆ. ಪರದೇಶಿಗರ ಕಾಲಿಗೆ ಬಡಿದ ಮಣ್ಣು ಚಿನ್ನವಾಗಿ ಕಾಣುವುದು. ನಮ್ಮ ಕಾಲಿಗೆ ಬಡಿದ ಚಿನ್ನವೂ ಹೇಸಿಗೆಯಂತೆ ಕಾಣುವುದು.  ನೋಡುವವನ ದೃಷ್ಟಿಕೋನ. ಏನು ಮಾಡಲೂ ಸಾಧ್ಯವಿಲ್ಲ. ಇನ್ನು ಕೆಲವರಿಗೆ ಎಲ್ಲವೂ ನಮ್ಮಲ್ಲಿಯೇ ಇದೆ ಎನ್ನುವ ಹಟ. ‘ನೀನು ಒಳ್ಳೆಯವನು ಎಂದರೆ, ‘ಛೇ! ನನ್ನಷ್ಟು ಕೆಟ್ಟವನು ಬೇರೊಬ್ಬನಿಲ್ಲ’ ಎಂದು ತಮ್ಮನ್ನು ತಾವೇ ಅಪರೋಕ್ಷವಾಗಿ ಹಳಿದುಕೊಳ್ಳುವರು. ಸಾಹಿತಿಗಳು ಬರೆದ ಸಾಹಿತ್ಯವನ್ನು ತಮ್ಮ ಸಂಘ-ಸಂಸ್ಥೆಗಳಿಗೆ ಉಪಯೋಗಿಸಿ ಕೊಳ್ಳುವವರ ಸಂಖ್ಯೆ ಎಲ್ಲೆಡೆಯೂ ಕಂಡುಬರುವದು. ಎಡ-ಬಲಪಂಥಗಳ ಕದನವಂತೂ ಮುಗಿಯಲಾರದ್ದು.
“Time is relative ಎಂದು Einstein 19 ನೆ ಶತಮಾನದಲ್ಲಿ ಕಂಡುಹುಡುಕಿದ, ಹೀಗೆಂದು ಹೇಳಲಾಗುತ್ತಿದೆ. ಆದರೆ 2 ನೆಯ ಶತಮಾನದ ನಾಗಾರ್ಜುನ ಬುದ್ಧ ಮುನಿ ಕಾಲವು ಸ್ವಭಾವಶೂನ್ಯ ಮತ್ತು ಸಾಪೇಕ್ಕ್ಷ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳು ಪರಸ್ಪರ ಸಾಪೇಕ್ಷ ಎಂದು ಸಾಧಿಸಿ ತೋರಿಸಿದ ಮೋದಲ ಭಾರತೀಯ ತತ್ತ್ವಶಾಸ್ತ್ರಜ್ಞ. ವನು ಬರೆದ ಗ್ರಂಥಗಳನ್ವು ಓದಿದರೆ ಗೋತ್ತಾಗುತ್ತದೆಪ್ರೋ. ಉದಯ ಕುಮಾರ ಹಬ್ಬು  ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.
“೧೯೭೦ರ ದಶಕದಲ್ಲಿ ನಾವು, ‘ವೈಮಾನಿಕಶಾಸ್ತ್ರ’ ಗ್ರಂಥದಲ್ಲಿ ಏನಾದರೂ ಸಾರ ಇದೆಯೇ ಎಂದು ಕಾಣಲು ಬಹಳ ಶ್ರಮಪಟ್ಟೆವು. ನಮ್ಮ ಭೂತಕಾಲವನ್ನು ವೈಭವೀಕರಿಸುತ್ತ ನಾವು ಎಲ್ಲಿಗೆ ಹೋಗುತ್ತಿದ್ದೇವೆಯೋ ನನಗೆ ತಿಳಿಯದು. ಈ ಗ್ರಂಥಕ್ಕಾಗಿ ಶ್ರಮಪಟ್ಟಿದ್ದಕ್ಕೆ ನನಗೆ ಖೇದವಿದೆ. ಕೊನೆಗೂ ಅದಕ್ಕೇನೂ ಅರ್ಥವಿರಲಿಲ್ಲ ಎಂದನಿಸುತ್ತಿದೆ” ಎಂದು ಪ್ರೊ. ಮುಕುಂದ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿರುವುದಾಗಿ ಆ ಪತ್ರಿಕೆ ಪ್ರಕಟಿಸಿದೆ. ನಂಬುವುದಾದರೆ ಎರಡೂ ವಾದಗಳಿಗೂ ಬೆಂಬಲವಿದೆ.
“ಈ ಶತಮಾನದ ಅಚ್ಚರಿಯಲ್ಲಿ ಅತಿದೊಡ್ಡ ರಹಸ್ಯ ಬಯಲಾಗಿದೆ. ನಿಮಗೆ ಗೊತ್ತಿರಬಹುದು ಇತ್ತೀಚೆಗೆ ಅಫ್ಘಾನಿಸ್ತಾನ್‍ದಲ್ಲಿ ಐದು ಸಾವಿರ ವರ್ಷಗಳ ಹಿಂದೆ ಮಹಾಭಾರತ ಯುದ್ಧದ ಕಾಲದಲ್ಲಿ ಉಪಯೋಗ ಮಾಡಿರುವ ಸೌರಶಕ್ತಿಯಿಂದ ಹಾರಾಡುತ್ತಿದ್ದ ಕಂಚಿನ ವಿಮಾನಗಳು ಪತ್ತೆಯಾಗಿದೆ! ಪ್ರಾಚೀನ ಭಾರತದ ಹಿಂದೂ ಬರೆಹಗಾರರಿಗೆ ವೈಮಾನಿಕ ಜ್ಞಾನದ ಅರಿವಿತ್ತು! ಅವರು ವಿಮಾನಗಳನ್ನು ರಚಿಸಿ ಬಳಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಹೊಂದಿದ ಯುದ್ಧವಿಮಾನಗಳು ಬಳಕೆಯಲ್ಲಿದ್ದವು ಎನ್ನುವಂತಹ ಹೇಳಿಕೆಗಳು, ಕೃತಿಗಳ ಉಲ್ಲೇಖಗಳು, ಪರಾಮರ್ಶೆಗಳು ಆಗಾಗ ಪತ್ರಿಕೆಗಳಲ್ಲಿ ಬರುತ್ತಿವೆ”.

“ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಏರೊನಾಟಿಕಲ್ ಎಂಜಿನಿಯರ್‌ಗಳು ೧೯೭೪ರಲ್ಲೇ ವೈಮಾನಿಕ ಶಾಸ್ತ್ರ” ಗ್ರಂಥವನ್ನು ವಿಶ್ಲೇಷಣೆ ಮಾಡಿದ್ದರು. ‘ಅದು ವೇದಕಾಲದ್ದಲ್ಲ, ಅದರಲ್ಲಿ ವಿವರಿಸಲಾದ ಸಂಗತಿಗಳಲ್ಲಿ ವೈಜ್ಞಾನಿಕ ತಥ್ಯವೂ ಇಲ್ಲ. ಅದೊಂದು ಕಟ್ಟು ಕಥೆ. ಈ ಲೇಖಕನಿಗೆ ವಿಮಾನ ತಂತ್ರಜ್ಞಾನದ ತಿಳುವಳಿಕೆ ಇಲ್ಲ’  ಎಂಬ ತೀರ್ಮಾನಕ್ಕೆ ಬಂದಿದ್ದರು. ಇಂದಿನಿಂದ ೪೦ವರ್ಷಗಳ ಮೊದಲೇ ’ಸೈಂಟಿಫಿಕ್ ಜರ್ನಲ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಬರೆದವರು ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ವೈಮಾನಿಕ ಇಂಜಿನಿಯರಿಂಗ್ ಮತ್ತು ಯಾಂತ್ರಿಕ ಇಂಜಿನಿಯರಿಂಗ್ ವಿಭಾಗಗಳ ವಿಜ್ಞಾನಿಗಳು”.

ಆದರೆ ಅಫ್ಘಾನಿಸ್ತಾನ್‍ದಲ್ಲಿ “ಗ್ರೇಟ್ ಡಿಸ್ಕವರಿ” ಸಂದರ್ಭದಲ್ಲಿ ಸೈನಿಕರ ಗುಂಪೊಂದು ಅಫ್ಘಾನಿಸ್ತಾನ್ದ  ಮರುಭೂಮಿಯಲ್ಲಿ ಸ್ಕೌಟ್ ಮಿಶನ್ ಸಂಶೋಧನೆ ಮಾಡಿತ್ತು. ಅಲ್ಲಿ ಒಂದು ಪುರಾತನ ವಿಮಾನದ ಹಾರುವ ಯಂತ್ರ ಮತ್ತು ಪ್ರಾಚೀನ ಭಾರತೀಯ ಸ್ಕ್ರಿಪ್ಟ್ ದೊರಕಿದೆ ಎಂದು ವಿವರ ನೀಡಿದ್ದಾರೆ.
“ಈ ವಿಮಾನ ಹೊರತೆಗೆಯಲು ಹೋಗಿ ಹತ್ತು ಅಮೇರಿಕದ ಸೈನಿಕರು ಸತ್ತಿದ್ದರೆ, ಇತ್ತೀಚೆಗೆ ಇದು ವಿಶ್ವದಲ್ಲಿ ದೊಡ್ಡ ಸುದ್ದಿ ಮಾಡಿ, ಇಡೀ ವಿಶ್ವವೇ ಭಾರತದ ಕಡೆಗೆ ನಿಬ್ಬೆರಗಾಗಿ ನೋಡುವ ಹಾಗೆ ಮಾಡಿದೆ ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ವಿಮಾನವು ಹಾರಾಡುತ್ತಾ ಇತ್ತು ಎಂದು ಗ್ರಂಥದಲ್ಲಿ ಓದಿದ್ದು ಗೊತ್ತು. ಅದಕ್ಕೆ ಸಾಕ್ಷಿ ಈಗ ಸಿಕ್ಕಿದೆ. [5-8-2015ರ ವರದಿ.] ಪುರಾತನಕಾಲದಲ್ಲಿ ವಿಮಾನವಿತ್ತೇ?

No comments:

Post a Comment

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...