Anant Vaidya

Anant Vaidya

Saturday, December 24, 2016

ವಿಜಯವಾಣಿ ಪತ್ರಿಕೆಗೆ ವಂದಿಸಿ
ಪಂಚಮಹಾಭೂತಗಳ ಪ್ರಪಂಚ [೧೮-೪-೨೦೧೫]
ನದಿ, ನದ, ಪ್ರಪಂಚದ ಕುರಿತು.. ’ಸರ್ವಂ ಪಂಚಭೂತಮಯಂ’ ಎಂದು ಹೇಳುವರು. ’ಮಹಾಭೂತಾನಿ’ ಎಂದು ದೇವರನ್ನು ವರ್ಣಿಸುವರು. ಪ್ರಪಂಚದ ಎಲ್ಲ ತತ್ತ್ವಗಳಿಗೆ ಈ ಪಂಚಭೂತಗಳು ಮಹತ್ವವಾದುದು. "ಬ್ರಹ್ಮಾಂಡ" ಸೃಷ್ಟಿಯ ಜೀವಾತ್ಮರೆಲ್ಲರಿಗೂ ಪ್ರಾಣವಿದೆ. ಗ್ರಹಿಕೆ ಇದೆ. ಇದಕ್ಕೆ ಕಾರಣ ಪಂಚಭೂತಗಳು. ಪಂಚ ಜ್ಞಾನೇಂದ್ರಿಯಗಳು.
ಸಿದ್ಧಪುರುಷರು ಬ್ರಹ್ಮಾಂಡವನ್ನು ಭೇದಿಸಿಕೊಂಡು [’ಬ್ರಹ್ಮಾಂಡಂ ಭಿತ್ವಾ’] ಬೇರೆ-ಬೇರೆ ಗ್ರಹಗಳಿಗೆ ಹೋದರೋ.. ಅಲ್ಲೆಲ್ಲವೂ ಪಂಚಭೂತಾತ್ಮರಾದ ಜೀವಿಗಳು ಮತ್ತು ವಾಸನಾಮಯ ಧಾತುಗಳನ್ನು ಕಂಡರು. ಖಗೋಲ ಶಾಸ್ತ್ರದ ಖಚಿತ ಮಾಹಿತಿ ಇಲ್ಲಿದೆ. ಇಂದಿನವರು ಇದನ್ನು ’ವೈಕಿಂಗ’ನಿಂದ ಕಂಡು ಹಿಡಿಯುತ್ತಿದ್ದಾರೆ......
ಭೂಮಿಯ ಅಕ್ಷಾಂಶ-ರೇಖಾಂಶ, ಸೂರ್ಯ-ಚಂದ್ರರಗತಿ, ಸೂರ್ಯಚಂದ್ರರ ಗ್ರಹಣಗಳಿಂದ ಪಂಚಭೂತದ ನಿಖರತೆಯನ್ನು ಕಂಡು ಹಿಡಿದರೆ.. ಪ್ರಸ್ತುತದಲ್ಲಿ ಗಣನೆ ಇಲ್ಲವೇ ಊಹೆಯಿಂದ..... ಅಳೆಯುತ್ತಾರೆ. ಆದರೆ ಇವುಗಳ ಪರಿಮಿತಿಯು ತರ್ಕಕ್ಕೆ ಇಲ್ಲವೇ ಗಣನೆಗೆ ನಿಲುಕುವುದಿಲ್ಲ. ಇದರ ಪೂರ್ಣಜ್ಞಾನ ವಿಜ್ಞಾನಕ್ಕೂ ಲಭಿಸಿಲ್ಲ!!.....
ಭೂಮಿ, ನೀರು, ವಾಯು ಅಗ್ನಿ ಮತ್ತು ಆಕಾಶ ಇವೇ ಪಂಚ ಮಹಾಭೂತಗಳು. "ಆಕಾಶದಿಂದ ವಾಯು.. ವಾಯುವಿನಿಂದ ಅಗ್ನಿ.. ಅಗ್ನಿಯಿಂದ ನೀರು.. ನೀರಿನಿಂದ ಪೃಥ್ವಿ.. ಒಂದಕ್ಕಿಂತ ಇನ್ನೊಂದು ಹೆಚ್ಚಿನ ಗುಣವನ್ನು ಪಡೆಯುವವು. ಇವುಗಳಲ್ಲಿ ಭೂಮಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಆಕಾಶದ್ವಾಯುಃ | ವಾಯೋರಗ್ನಿಃ | ಅಗ್ನೇರಾಪಃ | ಅದ್ಬ್ಯಃ ಪೃಥವಿ || ಶ್ರುತಿವಚನ."
ಪಂಚಭೂತಗಳ ಗುಣಗಳು... ಆಕಾಶಕ್ಕೆ ಒಂದು ಗುಣವೆಂದರೆ.. ವಾಯುವಿಗೆ ಎರಡುಗುಣ, ಅಗ್ನಿಗೆ ಮೂರುಗುಣ, ನೀರಿಗೆ ನಾಲ್ಕುಗುಣ, ಭೂಮಿಗೆ ಐದುಗುಣ.... ನೀರಿನಲ್ಲಿ.. ಶಬ್ದ-ಸ್ಪರ್ಶ-ರೂಪ-ರಸ ಎಂಬ ನಾಲ್ಕು ಗುಣಗಳಿವೆ. ಗಂಧವಿಲ್ಲ! ಅಗ್ನಿಯಲ್ಲಿ.. ಶಬ್ದ-ಸ್ಪರ್ಶ-ರೂಪಗಳಿವೆ. ರಸ-ಗಂಧಗಳಿಲ್ಲ! ವಾಯುವಿನಲ್ಲಿ.. ಶಬ್ದ-ಸ್ಪರ್ಶಗಳೆಂಬ ಎರಡು ಗುಣಗಳಿವೆ. ರೂಪ-ರಸ-ಗಂಧಗಳಿಲ್ಲ! ಆಕಾಶದಲ್ಲಿ.. ಶಬ್ದವು ಮಾತ್ರವಿದೆ. ಸ್ಪರ್ಶ-ರೂಪ-ರಸ-ಗಂಧಗಳಿಲ್ಲ!
ಆಕಾಶದ ಜನ್ಯಗುಣ ಶಬ್ದ.. ಆಕಾಶಕ್ಕೆ ಜನಕಗುಣವೆನ್ನುವುದು ಇಲ್ಲ! ಅದೇ ಪರಬ್ರಹ್ಮ!!
ವಾಯುವಿಗೆ ಜನ್ಯಗುಣ ಸ್ಪರ್ಶ.. ಶಬ್ದ ವಾಯುವಿನ ಜನಕಗುಣ! ಅಗ್ನಿಗೆ ಜನ್ಯಗುಣ ರೂಪ.. ಶಬ್ದ, ಸ್ಪರ್ಶ ಅಗ್ನಿಯ ಜನಕಗುಣ! ನೀರಿಗೆ ರಸ ಜನ್ಯಗುಣ.. ಶಬ್ದ, ಸ್ಪರ್ಶ, ರೂಪ ನೀರಿಗೆ ಜನಕಗುಣ! ಭೂಮಿಗೆ ಜನ್ಯಗುಣ ಗಂಧ.. ಶಬ್ದ, ಸ್ಪರ್ಶ,ರೂಪ, ರಸ ಭೂಮಿಯ ಜನಕಗುಣ!
ಇದನ್ನು ತಿಳಿಯಲು ಪಂಚ ಜ್ಞಾನೇಂದ್ರಿಯವು ಶರೀರದಲ್ಲಿ ಇದೆ. ಶಬ್ದವನ್ನು ಕೇಳಲು-ಕಿವಿ, ಸ್ಪರ್ಶಜ್ಞಾನಕ್ಕೆ-ಚರ್ಮ, ರೂಪವನ್ನು ನೋಡಲು-ಕಣ್ಣು, ರಸವನ್ನು ಅರಿಯಲು-ನಾಲಿಗೆ, ಗಂಧವನ್ನು ತಿಳಿಯಲು-ಮೂಗು ಮನುಷ್ಯನಲ್ಲಿದೆ. ಈ ಪಂಚಭೂತಗಳನ್ನು ಹೊಂದಿರುವ ಪೃಥ್ವಿಯೇ ಮೊದಲಿನಿಂದ ನಾಶಹೊಂದುತ್ತದೆ. ಪುನಃ ಆಕಾಶದಿಂದ ಪ್ರಾದುರ್ಭೂತವಾಗುವುದು. ಹೀಗೆ ಮನುಷ್ಯನ ಶರೀರದಲ್ಲಿ ಪಂಚಮಹಾಭೂತಗಳ ಸಮಾಗಮವಿದೆ.
ಅಂಗಾಂಗಳ ಸದುಪಯೋಗವೇ ಮಾನವನ ಮತ್ತು ಪದಾರ್ಥಗಳ ಸಾರ್ಥಕತೆ. ಆದರೆ ನಮ್ಮ ಇಂದ್ರಿಯಗಳೇ ನಮಗೆ ಮೋಸ ಮಾಡುವುದೆಂದಿಲ್ಲ! ತಣ್ಣಗಿರುವ ನೀರಿನ ಬಟ್ಟಲಿನಲ್ಲಿ ಒಂದು ಕೈಯನ್ನೂ.. ಬಿಸಿಯಾಗಿರುವ ನೀರಿನ ಬಟ್ಟಲಿನಲ್ಲಿ ಇನ್ನೊಂದು ಕೈಯನ್ನು ಏಕಕಾಲದಲ್ಲಿ ಇಟ್ಟು ಕೊಂಡಿರಿ. ಅವೆರಡೂ ಕೈಗಳನ್ನು ಅರಬೆಚ್ಚಗಿನ ನೀರಿನ ಬಟ್ಟಲಿನಲ್ಲಿ ಹಾಕಿ ನೋಡಿ... ಬಿಸಿಯಾದ ನೀರಿನಲ್ಲಿರುವ ಕೈಗೆ ತಂಪು.. ತಂಪಗಿರುವ ನೀರಿನಲ್ಲಿ ಇಟ್ಟ ಕೈಗೆ ಬಿಸಿಯಾಗುವುದು.
ಇದೇ ರೀತಿಯಲ್ಲಿ ಪ್ರತಿ ಇಂದ್ರಿಯವೂ ನಮಗೆ ಮೋಸ ಮಾಡೀತು!
ಎಣ್ಣೆಯ ದೀಪಕ್ಕೆ ಪಾತ್ರೆಯನ್ನು ಮುಚ್ಚಿದರೆ ಅದು ಆರಿಹೋಗುತ್ತದೆ. ಅಂತೆಯೇ ಅದಕ್ಕೆ ಪರ್ಯಾಯವಾದ ವ್ಯವಸ್ಥೆಯನ್ನು ವಿಜ್ಞಾನದಿಂದ ಸಂಶೋಧಿಸಿ ಪಡೆದುಕೊಂಡ. ಇಲ್ಲಿಯೂ ಒಂದು ಅಪಾಯ ಕಾದಿತ್ತು! ಸಹಜವಾಗಿ ಬಿದ್ದ ಬೆಂಕಿಯನ್ನು ನೀರು ಹಾಕಿ ಆರಿಸಬಹುದು. ವಿದ್ಯುತ್ತಿನಿಂದ ತಗಲಿದ ಬೆಂಕಿಯನ್ನು ನೀರು ಹಾಕಿ ಆರಿಸಲು ಬರುವುದಿಲ್ಲ!
ಪ್ರಗತಿಪರ ನಿಖರತೆಯೊಂದಿಗೆ ನಿಸರ್ಗದ ನೈಜತೆಯನ್ನು.. ಭೌತಿಕ ಸತ್ಯವನ್ನು ಅಸತ್ಯದಿಂದ ಬೇರ್ಪಡಿಸಿ ಅರಹುವುದು ವಿಜ್ಞಾನ. ನಿಸರ್ಗದ ಭೌತಿಕತೆಯ ತತ್ತ್ವಜ್ಞಾನವು ವ್ಯಕ್ತಗೊಳಿಸುವುದನ್ನು ಅರಿಯುವ ಅವಶ್ಯಕತೆಯನ್ನು ಮನಗಂಡು.. ವೇದ, ತತ್ತ್ವಜ್ಞಾನ, ಮತಧರ್ಮಗಳ ತುಲನೆಯನ್ನು ವಿಜ್ಞಾನದ ಆಧಾರದದೊಂದಿಗೆ ಕೈಗೊಳ್ಳುವ ಯತ್ನ-ಪರಂಪರೆ ನಡೆಯುತ್ತಲೇ ಇದೆ."
ಆದರೆ ಮಾನವ ಕಾಲಮಾನವನ್ನು ಅಳೆಯುವಲ್ಲಿ ಗೆದ್ದಿದ್ದಾನೆ. ಜ್ಯೋತಿಷಿಗಳಿಗೆ ತೊಂದರೆಯನ್ನು ಕೊಡುವುದು ಸೌರ-ಸಾವನ-ನಾಕ್ಷತ್ರ-ಬಾರ್ಹಸ್ಪತ್ಯ-ಚಾಂದ್ರಮಾನಗಳೆಂಬ ಕಾಲಮಾನವೇ! ಕಲಿಯುಗ ಪ್ರಮಾಣ - ೪,೩೨,೦೦೦ ಮಾನುಷವರ್ಷ! ದ್ವಾಪರಯುಗ ಪ್ರಮಾಣ - ೮,೬೪,೦೦೦ ಮಾನುಷವರ್ಷ! ತ್ರೇತಾಯುಗ - ೧೨,೯೬,೦೦೦ ಮಾನುಷವರ್ಷ! ಕೃತಯುಗ - ೧೭,೨೮,೦೦೦ ಮಾನುಷವರ್ಷ! ಒಟ್ಟು ನಾಲ್ಕು ಯುಗಗಳು ೪೩,೨೦,೦೦೦ ಮಾನುಷವರ್ಷ. ಈ ನಾಲ್ಕುಯುಗಗಳು = ದೇವತೆಗಳ ಒಂದುಯುಗ [ದೇವಮಾನದಿಂದ ೧೨,೦೦೦ ವರ್ಷ] ೧೦೦೦ ದೇವಯುಗ = ಬ್ರಹ್ಮನ ಒಂದು ಹಗಲು [ಪ್ರಾಣಿಗಳು ಜೀವಿಸಿರುವ ಕಾಲ] ೧೦೦೦ ದೇವಯುಗ = ಬ್ರಹ್ಮನ ಒಂದು ರಾತ್ರಿ [ಪ್ರಳಯ ಕಾಲ] ೨೦೦೦ ದೇವಯುತ = ಬ್ರಹ್ಮನ ಅಹೋರಾತ್ರಿ [೧ ದಿನ], ಅದೇ ಪ್ರಮಾಣದ ಬ್ರಹ್ಮನ ರಾತ್ರಿಯೂ ೧ ಕಲ್ಪವೆನಿಸುತ್ತದೆ. ೭೧ ದೇವಯುಗ = ೧ ಮನ್ವಂತರ. ಬ್ರಹ್ಮನಿಗೆ ಐವತ್ತು ವರ್ಷಕಳೆದು.. ಐವತ್ತೊಂದನೇ ವರ್ಷದ ಒಂದನೆ ತಿಂಗಳ ಇಪ್ಪತ್ತಾರನೇ ದಿನ ನಡೆಯುತ್ತಿದೆ. ಇದೇ ಶ್ವೇತವರಾಹಕಲ್ಪ.

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...