Anant Vaidya

Anant Vaidya

Sunday, February 26, 2017

ಪ್ರಾಚೀನ ಜ್ಞಾನ

ವಿಜಯವಾಣಿ ಪತ್ರಿಕೆಯನ್ನು ಕೃತಜ್ಞತೆಯಿಂದ ಸ್ಮರಿಸಿ....
ವಿಮಾನ ಸಂಶೋಧನೆಯ ಹಿನ್ನೆಲೆ
Saturday, 25.02.2017, 5:00 AM ವಿಜಯವಾಣಿ ಸುದ್ದಿಜಾಲ •
ವಿಮಾನವು ಗಾಳಿಯಲ್ಲಿ ತೇಲುವ ಒಂದು ಸಂಚಾರಿ ಮಾಧ್ಯಮ. ವಿಮಾನವನ್ನು ಗಾಳಿಯಲ್ಲಿ ಹಾರಾಡಲು ಸೂಕ್ತವಾದ ರೀತಿಯಲ್ಲಿ ನಿರ್ವಿುಸಲಾಗಿರುತ್ತದೆ. ಉದ್ದವಾದ ದೇಹ ಮತ್ತುಪಕ್ಷಿಯಂತೆ ಎಡ-ಬಲ ಪಕ್ಕದಲ್ಲಿ ಎರಡು ರೆಕ್ಕೆಗಳನ್ನು ಹೊಂದಿದ್ದು, ಪಕ್ಷಿಯನ್ನು ಹೋಲುತ್ತದೆ. ಪಕ್ಷಿಗಳು ಮೇಲೇರುವಾಗ ರೆಕ್ಕೆಗಳನ್ನು ಬಡಿಯುತ್ತವೆ. ಕೆಲವು ಎತ್ತರದ ಮೇಲೆ ಹೋದಾಗ ಸರಾಗವಾಗಿ ಒಂದೇ ಸಮಾನಾಂತರದಲ್ಲಿ ಚಲಿಸುವುದು. ಕೆಳಗಿಳಿಯುವಾಗ ಪುನಃ ರೆಕ್ಕೆಯನ್ನು ಬಡಿಯುವುದು. ಇದು ವಿಮಾನದ ಮೊದಲ ಸ್ವರೂಪವಾಗಿತ್ತು ಎಂದು ಸಂಶೋಧಕರ ಅಭಿಪ್ರಾಯ. ಆದರೆ ಇದರ ಮೂಲ ಕಲ್ಪನೆಗೆ ಬಲೂನೇ ಪ್ರೇರಕ ಎನ್ನುವುದನ್ನು ನಾವು ಮರೆಯುವಂತಿಲ್ಲ. ಪಕ್ಷಿಯ […]
ವಿಮಾನವು ಗಾಳಿಯಲ್ಲಿ ತೇಲುವ ಒಂದು ಸಂಚಾರಿ ಮಾಧ್ಯಮ. ವಿಮಾನವನ್ನು ಗಾಳಿಯಲ್ಲಿ ಹಾರಾಡಲು ಸೂಕ್ತವಾದ ರೀತಿಯಲ್ಲಿ ನಿರ್ವಿುಸಲಾಗಿರುತ್ತದೆ. ಉದ್ದವಾದ ದೇಹ ಮತ್ತುಪಕ್ಷಿಯಂತೆ ಎಡ-ಬಲ ಪಕ್ಕದಲ್ಲಿ ಎರಡು ರೆಕ್ಕೆಗಳನ್ನು ಹೊಂದಿದ್ದು, ಪಕ್ಷಿಯನ್ನು ಹೋಲುತ್ತದೆ. ಪಕ್ಷಿಗಳು ಮೇಲೇರುವಾಗ ರೆಕ್ಕೆಗಳನ್ನು ಬಡಿಯುತ್ತವೆ. ಕೆಲವು ಎತ್ತರದ ಮೇಲೆ ಹೋದಾಗ ಸರಾಗವಾಗಿ ಒಂದೇ ಸಮಾನಾಂತರದಲ್ಲಿ ಚಲಿಸುವುದು. ಕೆಳಗಿಳಿಯುವಾಗ ಪುನಃ ರೆಕ್ಕೆಯನ್ನು ಬಡಿಯುವುದು. ಇದು ವಿಮಾನದ ಮೊದಲ ಸ್ವರೂಪವಾಗಿತ್ತು ಎಂದು ಸಂಶೋಧಕರ ಅಭಿಪ್ರಾಯ. ಆದರೆ ಇದರ ಮೂಲ ಕಲ್ಪನೆಗೆ ಬಲೂನೇ ಪ್ರೇರಕ ಎನ್ನುವುದನ್ನು ನಾವು ಮರೆಯುವಂತಿಲ್ಲ. ಪಕ್ಷಿಯ ಮೈಮಾಟವನ್ನು ಮರೆತು ಪ್ರಯೋಗಗಳು ಸಾಗಿದ್ದು ಇತಿಹಾಸ. ಅದರ ಒಂದು ಪಕ್ಷಿನೋಟವನ್ನು ಮೆಲುಕು ಹಾಕೋಣ.
ವಿಮಾನವು ಮುಖ್ಯವಾಗಿ ಎಂಜಿನ್ ಮತ್ತು ಪ್ರೊಪೆಲ್ಲರ್ಗಳನ್ನು ಹೊಂದಿದ್ದು, ಬಿಸಿ ಗಾಳಿಯ ಒತ್ತಡದಿಂದ ಆಕಾಶಕ್ಕೆ ಹಾರುವಲ್ಲಿ ಸಫಲವಾಗುತ್ತದೆ. ವಿಮಾನಚಾಲಕನಿಗೆ ವಿಮಾನ ನಡೆಸಲು ವಿಶೇಷವಾದ ತರಬೇತಿ ನೀಡಲಾಗುತ್ತದೆ. ಗಗನದಲ್ಲಿ ಹಕ್ಕಿಗಳ ಹಾರಾಟವನ್ನು ಗಮನಿಸಿ ಅಂತೆಯೇ ಹಾರುವ ಮಾಧ್ಯಮವೊಂದನ್ನು ಕಂಡುಹಿಡಿಯಲು ಹದಿನೈದನೇ ಶತಮಾನದಿಂದಲೂ ಹಲವು ಸಕ್ರಿಯ ಪ್ರಯತ್ನಗಳು ನಡೆಯುತ್ತಿದ್ದವು. ಅವುಗಳಲ್ಲಿ ಮುಖ್ಯವಾಗಿ ಅವಲೋಕಿಸಬಹುದಾದ ಮಾಹಿತಿಗಳು.
ಲಿಯೊನಾರ್ಡೆ ಡಾ ವಿಂಚಿ (1452): ಜನ್ಮತಃ ಇಟಲಿಯವನು. ಖ್ಯಾತ ಚಿತ್ರಕಾರ, ತತ್ತ್ವಜ್ಞಾನಿ, ಕವಿ, ಶಿಲ್ಪಿ, ಗಣಿತಜ್ಞ, ವಾಸ್ತುಶಿಲ್ಪಿ, ಅನ್ವೇಷಕ, ಎಲ್ಲವೂ ಆಗಿದ್ದ ಮಹಾನ್ ಮೇಧಾವಿ; ‘ಮೋನಾಲಿಸಾ’ ಹಾಗೂ ‘ದ ಲಾಸ್ಟ್ ಸಪರ್’ನಂತಹ ವಿಶ್ವವಿಖ್ಯಾತ ಕಲಾಕೃತಿಗಳ ಸೃಷ್ಟಿಕರ್ತ; ಪ್ಯಾರಾಚೂಟ್ ಹಾಗೂ ಹೆಲಿಕಾಪ್ಟರ್ಗಳ ಬಗೆಗಿನ ಮೊದಲ ಕಲ್ಪನೆ ಇವನಿಂದಲೇ ಜನಿಸಿದೆ ಎಂಬುದು ಆಧುನಿಕ ಸಂಶೋಧಕರ ಅಭಿಪ್ರಾಯ.
ವಾಯುವಿಗಿಂತ ಭಾರವಾಗಿರುವ ಪಕ್ಷಿಗಳು ಗಾಳಿಯಲ್ಲಿ ಹಾರಬಲ್ಲವಾದರೆ ಮಾನವ ನಿರ್ವಿುತಯಂತ್ರ ಹಾರಾಡುವುದು ಅಸಾಧ್ಯವೇನಲ್ಲ ಎಂದು ಬಲವಾಗಿ ನಂಬಿದ್ದ ಈತ ಈ ಉದ್ದೇಶಕ್ಕಾಗಿ ರೆಕ್ಕೆಯಂತಹ ರಚನೆಯುಳ್ಳ ಒಂದು ವಾಹನವನ್ನು ನಿರ್ವಿುಸುವ ಯೋಜನೆ ತಯಾರಿಸಿದ್ದ. ಈ ಯಂತ್ರದೊಳಗೆ ಒಬ್ಬ ವ್ಯಕ್ತಿ ನಿಂತು ಎರಡು ರೆಕ್ಕೆಗಳನ್ನು ಸತತವಾಗಿ ಚಲಿಸುವಂತೆ ಮಾಡಿದರೆ ಆತ ಸುಲಭವಾಗಿ ಹಾರಾಡಬಹುದೆಂದು ಡಾ ವಿಂಚಿಯ ಆಲೋಚನೆಯಾಗಿತ್ತು. ಪೋರ್ಚುಗಲ್ನ ಬಾರ್ತೆಲೋಮಿಯೊ ಗುಸ್ಮಾವೊದಲ್ಲಿ 1709ರ ಆಗಸ್ಟ್ 8ರಂದು ಬಿಸಿಗಾಳಿ ತುಂಬಿದ ಬಲೂನಿನ ತಳಕ್ಕೆ ಅಳವಡಿಸಿದ ಬುಟ್ಟಿಯಲ್ಲಿ ಕುಳಿತು ಅಲ್ಪಕಾಲದ ಹಾರಾಟ ನಡೆಸಿದನೆಂದು ಹಳೆಯ ದಾಖಲೆಗಳಿಂದ ತಿಳಿದುಬರುತ್ತದೆ.
ಫ್ರಾನ್ಸಿನ ಜೋಸೆಫ್ ಮತ್ತು ಎಟೀನ್ ಮಾಂಟ್ಗಾಲ್ಪಿಯರ್ ಎಂಬ ಸೋದರರು 1783ರ ಜೂನ್ 5ರಂದು ಬಟ್ಟೆಯಲ್ಲಿ ತಯಾರಿಸಿದ, ಬಿಸಿಗಾಳಿ ತುಂಬಿದ ಬಲೂನಿನಂತಹ ಗೋಳವನ್ನು ಸುಮಾರು ಒಂದು ಮೈಲಿನಷ್ಟು ದೂರಕ್ಕೆ ಹಾರಿಸಿದ್ದರು. ಅದೇ ವರ್ಷ ಸೆಪ್ಟೆಂಬರ್ 19ರಂದು ಈ ಸೋದರರು ಫ್ರಾನ್ಸಿನ ಒಂದು ಪಟ್ಟಣದಲ್ಲಿ ಇಂತಹುದೇ ಬಲೂನಿನಲ್ಲಿ ಕುರಿ, ಕೋಳಿ ಹಾಗೂ ಬಾತುಕೋಳಿಗಳನ್ನಿರಿಸಿ ಹಾರಿಬಿಟ್ಟರಾದರೂ ಆ ಬಲೂನು ಸ್ವಲ್ಪ ಸಮಯದೊಳಗೇ ಸ್ಪೋಟಗೊಂಡು ನಾಶವಾಯಿತು. ಜೀನ್ ಫ್ರಾಂಕಾಯ್್ಸ ಪಿಯಾತ್ರೆ ಡಿರೋಜ್ಯೆರ್ ಹಾಗೂ ಫ್ರಾಂಕಾಯ್್ಸ ಲಾರೆಂಟ್ ಮಾರ್ಕ್ವಿಸ್ ಡಿ ಆರ್ಲ್ಯಾಂಡ್ಸ್ ಎಂಬುವವರು 1783ರ ನವೆಂಬರ್ 21ರಂದು ನಡೆಸಿದ ಮತ್ತೊಂದು ಹಾರಾಟದಲ್ಲಿ ‘ಮಾಂಟ್ಗಾಲ್ಪಿಯರ್ ಬಲೂನ್’ನಲ್ಲಿ ಕುಳಿತು 23 ನಿಮಿಷಗಳಲ್ಲಿ ಒಂಭತ್ತು ಕಿಲೋಮೀಟರುಗಳಷ್ಟು ದೂರ ಹಾರಾಟ ನಡೆಸಿದ್ದರು. ಸದ್ಯಕ್ಕೆ ಚಾಲ್ತಿಯಲ್ಲಿರುವ ದಾಖಲೆಗಳಂತೆ ಈ ಜೋಡಿಯನ್ನೇ ಆಕಾಶದಲ್ಲಿ ಸುದೀರ್ಘ ಕಾಲ ಹಾರಾಟ ನಡೆಸಿದ ಮೊದಲ ಮಾನವರೆಂದು ಗುರುತಿಸಲಾಗುತ್ತದೆ.
ನಂತರದ ದಿನಗಳಲ್ಲಿ ಬಲೂನುಗಳ ಹಾರಾಟ ಸಾಮಾನ್ಯವಾದ ಸಂಗತಿಯಾಯಿತು. ಈಗಲೂ ಕೂಡ ವೈಜ್ಞಾನಿಕ ಸಂಶೋಧನೆಗಳಿಗಾಗಿ ಇಂತಹ ಬಲೂನುಗಳ ಹಾರಾಟ ನಡೆಯುತ್ತಿರುತ್ತದೆ. ಇಂತಹ ಬಲೂನುಗಳ ಹಾರಾಟ ಜನಪ್ರಿಯ ಸಾಹಸಕ್ರೀಡೆಯೂ ಹೌದು.
ಒಟ್ಟೊ ಲಿಲಿಯೆನ್ತಾಲ್ (1891): ಜರ್ಮನಿಯ ಒಬ್ಬ ಅಭಿಯಂತರನಾಗಿದ್ದನು. ಈತ ಉಡಾವಣಾ ಶಾಸ್ತ್ರ (ಏರೋಡೈನಾಮಿಕ್ಸ್) ಮತ್ತು ಹಾರುವ ಉಪಕರಣಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದನು, ಮತ್ತು ಈತ ಮೊದಲ ಹಾರುವ ಸಾಧನ ಅಥವಾ ಗ್ಲೈಡರನ್ನು ವಿನ್ಯಾಸಗೊಳಿಸಿದನು. ಈತ ನಿರ್ವಿುಸಿದ ಗ್ಲೈಡರ್ ಒಬ್ಬ ವ್ಯಕ್ತಿ ಕುಳಿತುಕೊಂಡು ಸಾಕಷ್ಟು ದೂರದವರೆಗೆ ಹಾರುವಲ್ಲಿ ಸಫಲವಾಗಿತ್ತು. ಈತ ಇಪ್ಪತೆôದು ಸಾವಿರಕ್ಕೂ ಹೆಚ್ಚು ಪ್ರಾಯೋಗಿಕ ಹಾರಾಟಗಳನ್ನು ನಡೆಸಿದ್ದನು. ಆದರೆ ಕೊನೆಗೆ ಅಂತಹ ಒಂದು ಪ್ರಯೋಗ ನಡೆಸುವಾಗ ಗಾಳಿಯ ಅತಿ ವೇಗದಿಂದ ಕೆಳಗೆ ಬಿದ್ದು ಮರಣಿಸಿದನು.
ಸ್ಯಾಮ್ಯುಯೆಲ್ ಲ್ಯಾನ್ಗಲೀ (1891): ಇವನು ಒಬ್ಬ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ಸಂಶೋಧಕನಾಗಿದ್ದನು. ಉಗಿ ಇಂಜಿನುಗಳು ಮತ್ತು ಪ್ರೊಪೆಲ್ಲರುಗಳನ್ನು ಬಳಸಿ ಹಲವು ಪ್ರಯೋಗಗಳನ್ನು ಮಾಡಿದನು. ಈತ ವಿಮಾನದ ಮಾದರಿಯೊಂದನ್ನು ನಿರ್ವಿುಸಿದನು ಹಾಗೂ ಅದನ್ನು ‘ಏರೋಡ್ರೋಮ್ ಎಂದು ಕರೆದನು.
ಅದು ಉಗಿ ಎಂಜಿನನ್ನು ಹೊಂದಿತ್ತು. 1891ರಲ್ಲಿ ಈತನ
ಮಾದರಿ ವಿಮಾನ 3/4 ಮೈಲಿಯಷ್ಟು ದೂರ ಹಾರುವಲ್ಲಿ ಸಫಲವಾಗಿತ್ತು.
ಪ್ರಯೋಗವೇ ಸಿದ್ಧಿಯೇನಲ್ಲ! ಪ್ರಯೋಗದಲ್ಲಿ ಹಲವು ಸಾರಿ ಎಡವಿ ಬೀಳುವುದು ಸಹಜ. ಆದರೆ ಅದನ್ನು ತಿದ್ದಿಕೊಂಡು ಸಫಲವಾಗುವುದು ಮಹತ್ವಪೂರ್ಣ ಮೆಟ್ಟಿಲು.

No comments:

Post a Comment

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...