Anant Vaidya

Anant Vaidya

Sunday, April 30, 2017

ಭೀಮ ನಿರ್ಣಯ
ಕುರುಕ್ಷೇತ್ರದ ಮಹಾಸಂಗ್ರಾಮ ಮುಗಿದಿತ್ತು. ಪಾಂಡವರ ಆಡಳಿತ ಹಸ್ತಿನಾವತಿಯಲ್ಲಿ ಪ್ರಾರಂಭವಾಗಿತ್ತು. ಒರ್ವವ್ಯಕ್ತಿಯು ಚಕ್ರವರ್ತಿ ಧರ್ಮರಾಜನಲ್ಲಿ ಬಂದು ಸಹಾಯವನ್ನು ಯಾಚಿಸಿದ. “ಆದೀತು! ನಾಳೆ ಬಾ ನೆರವೇರುಸುತ್ತೇನೆ” ಎಂದು ಧರ್ಮರಾಜ ಹೇಳಿದ.
ಒಮ್ಮೆಗಲೇ ಹಸ್ತಿನಾವತಿಯ ಹರ್ಷೋದ್ಗಾರದ ಧ್ವನಿ ಮೊಳಗ ತೊಡಗಿತು. ಪ್ರಜೆಗಳೆಲ್ಲರೂ ಸಂತೋಷದಿಂದ ಕೋಟೆಯ ಸಮೀಪ ನೆರವೇರಿದರು. ಯಾರು ಧ್ವನಿಯನ್ನು ಮೊಳಗಿಸುತ್ತಿರುವವರು ಎಂದು ನೋಡಲು ಅರ್ಜುನ, ಸಹದೇವ, ನಕುಲ, ದ್ರೌಪದಿಯರು ಆಗಮಿಸಿದರು! ಭೀಮ ತನ್ಮಯತೆಯಿಂದ ವಿಜೃಂಭಣೆಯ ನಗಾರಿಯನ್ನು ಬಾರಿಸುತ್ತಲೇ ಇದ್ದ.
ಎಲ್ಲರೂ : “ಹಸ್ತಿನಾವತಿಯಲ್ಲಿ ಏನು ಅತ್ಯಂತ ಹರ್ಷದಾಯಕ ಸಮಾಚಾರ ನಡೆದಿದೆ”?
ಭೀಮ : “ನನ್ನಣ್ಣ ಧರ್ಮರಾಜ ನಾಳೆಯವರೆಗೂ ಬದುಕಿರುತ್ತಾನಂತೆ, ಇದಕ್ಕಿಂತಲೂ ಆನಂದದ ವಿಷಯ ಬೇರೊಂದು ಇದೆಯಾ” .
ಎಲ್ಲರೂ : “ಏನು ನಡೆಯಿತು ಹೇಳು” ಎಂದು ಒತ್ತಾಯಿಸಿದರು.
ಭೀಮ : ಕರ್ಣ ಎಡಗೈಯಿಂದಲೂ ಕೊಡುತ್ತಿದ್ದ. ಕೊಡುವ ಕೈಯಲ್ಲಿ ತಾರತಮ್ಯವಿರುತ್ತಿರಲಿಲ್ಲ! ಬಲಗೈ ಕೊಟ್ಟಿದ್ದು ಎಡಗೈಗೂ, ಎಡಗೈ ಕೊಟ್ಟಿದ್ದು ಬಲಗೈಗೂ ತಿಳಿಯಬಾರದು ಎನ್ನುವುದು ಅವನ ಅಂತರಂಗವಾಗಿತ್ತು. ಮತ್ತೆರಡು ವಿಷಯವನ್ನು ಹೇಳುತ್ತಿದ್ದ! ಒಂದು, ತಡಮಾಡಿದರೆ ಮನಸ್ಸು ಪಲ್ಲಟವಾಗಬಹುದು. ಎರಡು, ರಾತ್ರಿ ಮಲಗಿದವನು ಬೆಳಗನ್ನು ಕಾಣುತ್ತಾನೆಂಬ ಯಾವ ವಿಶ್ವಾಸವೂ ಇಲ್ಲ!
ಎಲ್ಲರೂ : ಕರ್ಣನ ವಿಷಯ ಬಿಡು. ಧರ್ಮರಾಜನ ವಿಷಯ ಹೇಳು.
ಭೀಮ : ಅಲ್ಲೇ ಇದೆ ಗುಟ್ಟು. ನಮ್ಮ ಧರ್ಮರಾಜನಿಗೆ ಇವೆರಡರ ಭಯವೂ ಇಲ್ಲ! ಒಂದು, ಯಾಚಿಸಿದವನಿಗೆ ನಾಳೆ ಕೊಡುತ್ತೇನೆ ಎಂದ. ಅಂದರೆ ಆತನಿಗೆ ಮನಸ್ಸು ಚಂಚಲ. ಪಲ್ಲಟ ಆಗಬಹುದು ಎನ್ನುವ ಭಯವಿಲ್ಲ. ಎರಡು, ನಾಳೆಯವರೆಗೆ ಬದುಕುತ್ತೇನೆ ಎಂಬ ನಂಬಿಗೆ ಇದೆ! ಇದಕ್ಕಿಂತ ಸಂತೋಷದ ವಿಷಯ ಬೇಕೇ? ಹೊಡೆಯಿರಿ ಚಪ್ಪಾಳೆ. ಎಲ್ಲರೂ ನಕ್ಕು ಬಿಡಿ. ಕುಣಿದಾಡಿ ಹಬ್ಬಮಾಡಿ… ಎನ್ನುತ್ತಾ ಸಂತೋಷದ ನಗಾರಿಯನ್ನು ಹೊಡೆಯುತ್ತಲೇ ಉಳಿದ.
ಈ ವಿಷಯ ಧರ್ಮರಾಜನಿಗೆ ತಿಳಿಯಿತು. ನಾಚಿಕೆ ಪಟ್ಟ. ಆಶ್ವಾಸನೆಯನ್ನು ನೀಡಿದವನನ್ನು ಕರೆದು ಕೇಳಿದ್ದನ್ನು ಕೊಟ್ಟು ಕೇಳಿದ.
#ನೋಡಿದ್ದು - ಕೇಳಿದ್ದು - ಹೇಳಿದ್ದು#

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...