ಸುಪ್ರಜೆ.
ಕೌಸಲ್ಯಾಸುಪ್ರಜಾ ರಾಮ ಪುರ್ವಾ
ಸಂಧ್ಯಾ ಪ್ರವರ್ತತೇ|
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ
ದೈವ ಮಾಹ್ನಿಕಂ || ....... ರಾಮಾಯಣ
ರಾಮಾ! ನಿನ್ನಿಂದ ಕೌಸಲ್ಯೆಯು ತಾಯಿಯಾದಳು. ಮಗು! ಪ್ರಾತಃಸ್ಸಂಧ್ಯೆ
ಆಯಿತು. ಸೂರ್ಯ ಉದಯಸಿತ್ತಿದ್ದಾನೆ! ದೈವ ಸಂಬಂಧವಾದ ಆಹ್ನಿಕವನ್ನು ಮಾಡಬೇಕಾಗಿದೆ. ನರಶಾರ್ದೂಲನೇ
[ಹಾಸಿಗೆಯಿಂದ] ಎದ್ದೇಳು!!
ಎಂತಹಾ ಗುರು ಪ್ರೀತಿ ನೋಡಿ!
ಪರಂಪರೆಯ
ಕ್ರಮದಂತೆ ಶಿಷ್ಯನಾದವನೇ ಗುರುವನ್ನು ಏಳಿಸಬೇಕು. ಆದರೆ ಇಲ್ಲಿ ಗುರುಗಳೇ ಶಿಷ್ಯನನ್ನು ಏಳಿಸುವರು!
ಗುರು ಎದ್ದರೆ ಶಿಷ್ಯ ಕೈಕಟ್ಟಿ ನಿಲ್ಲಬೇಕು. ಗುರು ಮಲಗಿದರೆ
ಬೀಸಣಿಗೆಯಿಂದ ಗುರುಗಳಿಗೆ ನಿದ್ರೆ ಬರುವ ತನಕ ಬೀಸಬೇಕು. ಗುರುವನ್ನು ಆರಾಧ್ಯ ದೈವ ಎಂದು ಪೂಜಿಸಬೇಕು.
ಆದರೆ ರಾಮ ಮಲಗಿದ್ದ! ಅದೂ ಸೂರ್ಯೋದಯದ ತನಕ! ಆದರೆ ಗುರುಗಳು ಸಿಟ್ಟಿಗೇಳಲಿಲ್ಲ! ಶಾಪವನ್ನೂ ಕೊಡಲಿಲ್ಲ!!
ಅದೂ ಶಾಸ್ತ್ರದ ಪ್ರಕಾರ ಕರ್ತವ್ಯವನ್ನು ಮರೆತು ಮಲಗಿದ
ಶಿಷ್ಯನನ್ನು ಅಕ್ಕರೆಯಿಂದ ಏಳಿಸುವರು.
“ಹತ್ತು ಹಡೆಯುವುದಕ್ಕಿಂತ ಮುತ್ತು ಹಡೆಯ ಬೇಕು. ಅದಕ್ಕೆ
ಅನುಪಮಿ ರಾಮ.”
ರಾಮನಿಗೆ ಬಲಾ-ಅತಿಬಲ ಎನ್ನುವ ವಿದ್ಯೆಯನ್ನು ಮೊದಲ ದಿನವೇ
ಗುರು ವಿಶ್ವಾಮಿತ್ರರು ನೀಡಿದರು. ರಾಮನಿಗೇ ಆದರೂ ಅಷ್ಟೂ ವಿದ್ಯೆಯನ್ನು ವಿಶ್ವಾಮಿತ್ರರು ಒಮ್ಮೆಲೇ
ಹೇಳಿ ಕೊಡಲಿಲ್ಲ.
ತಾಟಕೆಯ ವಧೆಯನಂತರ ದೇವತೆಗಳು ಹೇಳಿದುದರಿಂದ ಕುಶಧ್ವಜ
ದತ್ತವಾದ ಸಕಲ ಅಸ್ತ್ರಗಳನ್ನು ನಿಡಿದರು. ಅಲ್ಲಿಯವರೆಗೂ ರಾಮನ ಶಿಷ್ಯತ್ವವನ್ನು ವಿಶ್ವಾಮಿತ್ರರು ಪರೀಕ್ಷಿಸಿದರು
ಎನ್ನುವುದು ಪ್ರಾಜ್ಞರ ಅಭಿಪ್ರಾಯ.
ಆದರೆ ರಾಮನೆಂತವನು? ಅವನು ಜಗತ್ತಿನ ಸುಪ್ರಜೆ. ಕೌಸಲ್ಯೆಯಿಂದ
ಜನಿಸಿದ ಸುಪ್ರಜೆ.
ಅವನಿಗೆ ವಶಿಷ್ಠ ಹಾಗೂ ವಿಶ್ವಾಮಿತ್ರರಿಬ್ಬರೂ ಗುರುಗಳು.
ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದ ವಶಿಷ್ಠ-ವಿಶ್ವಾಮಿತ್ರರು ರಾಮನಿಗೆ ವಿದ್ಯೆಯನ್ನು ಧಾರೆ ಎರೆಯುವಲ್ಲಿ
ಇಬ್ಬರೂ ಒಂದಾದರು-ಮುಂದಾದರು.
ರಾಮನಂತಹಾ ವ್ಯಕ್ತಿ ಜನಿಸಿದರೆ ಯಾವ ತಾಯಿಯ ಗರ್ಭ ಪಾವನವಾಗದಿರುವುದು?
ಕೇವಲಾ ಸಂಖ್ಯೆಯ ಲೆಕ್ಕದಲ್ಲಿ ನಾವಿದ್ದರೆ ಸಾಲದು. ಈ
ಜಗತ್ತಿನಲ್ಲಿ ಎಲ್ಲವೂ ಲೆಕ್ಕಕ್ಕೆ ಸಿಗುತ್ತದೆ.
ಆದರೆ ನಿಜವಾಗಿ ಲೆಕ್ಕಕ್ಕೆ ಸಿಗಬೇಕಾದುದು ಕರ್ತವ್ಯವನ್ನು
ನೆರವೇರಿಸಿ ‘ಸುಪ್ರಜೆ’ ಆಗುವುದು. ಆಗಬೇಕು