[ಚಿಂತನೆಯನ್ನು ಕಳ್ಳಲು ಎಲ್ಲರಿಗೂ
ಅಧಿಕಾರವಿದ. ಶಬ್ದವನ್ನಲ್ಲ! ಅಂದರೆ ಚಿಂತನೆಯಲ್ಲಿಯೂ ಹೆಸರನ್ನು ನಮೂದಿಸಲು ಮರೆಯಬೇಡಿ.]
ಅಮೃತತ್ತ್ವ ಚಿಂತನೀಯ
ಓಂ ಅಸತೋ ಮಾ ಸದ್ಗಮಯ | ತಮಸೋ ಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾsಮೃತಂಗಮಯ | ಓಂ ಶಾಂತಿಃ ಶಾಂತಿಃ ಶಾಂತಿಃ
|| ....ಉಪನಿಷತ್.
“ಓಂ” ಅಸತ್ಯದಿಂದ ಸತ್ಯದ ಕಡೆಗೆ ನನ್ನನ್ನು ನಡೆಸು. ಕತ್ತಲಿನಿಂದ
ಬೆಳಕಿನ ಕಡೆಗೆ ನನ್ನನ್ನು ನಡೆಸು. ಮೃತ್ಯುವಿನಿಂದ ಅಮೃತತ್ತ್ವದ ಕಡೆಗೆ ನನ್ನನ್ನು ನಡೆಸು. ಶಾಂತಿಸಿಗಲಿ....
ಶಾಂತಿಸಿಗಲಿ..... ಶಾಂತಿಸಿಗಲಿ.
ನಾವು ನಿಂತ ನೆಲ-ನೆಲೆ..... ಅಸತ್ಯ, ಕತ್ತಲು, ಮೃತ್ಯು,
ಅಶಾಂತಿಯಿಂದ ಕೂಡಿದೆ. ಅವುಗಳಿಂದ ಬಿಡುಗಡೆ ಆಗಬೇಕಾದುದು ಜೀವಿಯ ಗುರಿ. ಬಿಡುಗಡೆಯೇ ಮೋಕ್ಷ. ಮೋಕ್ಷವೇ
ಸಾಧಿಸಬೇಕಾದ ಕೊನೆಯ ಪುರುಷಾರ್ಥ.
ಒಬ್ಬ ಮಹಾ ಬಡವ. ಕಣ್ಣಿರುಡುವವ. ಅವನ ಬಡತನವನ್ನು ಕಂಡು
ಪರಿತಪಿಸಿದ ಪಾರ್ವತಿಯು, ಕರುಣಾಮಯಿಯಾದ ಶಿವನಿಗೆ ಏನಾದರೂ ಸಹಾಯ ಮಾಡಿ ಎಂದು ಗೋಗರೆದಳು. ಶಿವನೆಂದ
ಅವನಿಗೆ ಯೋಗವಿಲ್ಲ. ಆದರೂ ಪಾರ್ವತಿಯ ಒತ್ತಾಯ ನಿಲ್ಲಲಿಲ್ಲ. ಅವನು ಹೋಗುವ ದಾರಿಯುದ್ದಕ್ಕೂ ಶಿವ ಚಿನ್ನದ ಮಳೆಯನ್ನು ಸುರಿಸಿದ.
ಅದೇ ಕ್ಷಣದಲ್ಲಿ ಆ ಬಡವ ಯೋಚಿಸಿದ.... “ಕಣ್ಣಿಲ್ಲದವರು
ಹೇಗೆ ನಡೆಯುವರು? ಕುರುಡರಿಗೆ ನಡೆಯಲು ಎಷ್ಟು ಕಷ್ಟವಾದೀತು? ನಾನು ಕಣ್ಣು ಮುಚ್ಚಿಕೊಂಡು ನಡೆದು ನೋಡುತ್ತೇನೆ”
ಎಂದು ನಿರ್ಣಯಿಸಿದ! ನಡೆದ.... ನಡೆದ...... ಶಿವನು ಎಲ್ಲಿಗೆ ಚಿನ್ನದ ಮಳೆಯನ್ನು ನಿಲ್ಲಿಸಿದನೋ ಅಲ್ಲಿಯವರೆಗೆ....
ಕಣ್ಣು ಮುಚ್ಚಿಕೊಂಡು ನಡೆದ!!
ನಾವು ಕಣ್ಣಿದ್ದ ಕುರುಡರು. ಕಿವಿ ಇದ್ದೂ ಕಿವುಡರು.
ನಮಗೆ ಅಸತ್ಯ, ಕತ್ತಲು, ಮೃತ್ಯುವೇ ಅತಿ ಪ್ರೀತಿ. ನಾವು ಅದರಿಂದ ಬಿಡುಗಡೆಯಾಗಲು ಬಯಸುವುದೇ ಇಲ್ಲ.
ಮಿಥ್ಯೆಯಾದ ಜಗತ್ತು-ಜಗತ್ತಿನ ಆಶೆ-ಆಮಿಷೆಗಳೇ ನಮಗೆ
ಬಹಳ ಆಪ್ಯಾಯಮಾನ. ಅಶಾಂತಿಯೇ ನಮಗೆ ಸಿಹಿ.
ಆದರೆ ಸತ್ಯ, ಬೆಳಕು, ಅಮೃತತ್ತ್ವವನ್ನು ಪಡೆದರೆ ಮಾತ್ರ
ಶಾಂತಿ ಲಭಿಸುವುದು. ಸತ್ಯವೇ ಬೆಳಕಾದರೆ ಅಮೃತತ್ತ್ವದ ಶಾಂತಿ ಖಂಡಿತಾ ಸಿಗುವುದು.
[ಪ್ರಕಟಣೆಯ ‘ಸಬೋಧ’. ಕೃಪೆ:
ಸಂಯುಕ್ತ ಕರ್ನಾಟಕ]
No comments:
Post a Comment