ಸನ್ಮಾನ್ಯರೇ
ಶುಭಾಶಯಗಳು.
ದೀಪ+ಆವಳಿ=ದೀಪಾವಳಿ. ಬಲೀಂದ್ರ+ಪೂಜೆ. ನರಕಾಸುರನ+ಪೂಜೆ. ಲಕ್ಷ್ಮೀ+ಪೂಜೆ.
ದೀಪಗಳ ಸಮೂಹ.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ |
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ||
ದೀಪಜ್ಯೋತಿಃ ಪರಬ್ರಹ್ಮಾ ದೀಪಜ್ಯೋತಿರ್ಜನಾರ್ದನಃ |
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ||
[ಸಂಧ್ಯಾದೀಪದ ಮಹತ್ವವನ್ನು ವಿವರಿಸಲಾಗಿದೆ. ‘ಶತ್ರುಬುದ್ಧಿ’ಯನ್ನು ಅಂತರಂಗಕ್ಕೂ ಹೋಲಿಸಿಕೊಳ್ಳಬೇಕು.]
ಶಿಲಾಯುಗದಿಂದ ಬಂದ ಕಾಡಾಡಿ ಮನುಷ್ಯ, ಬೆಂಕಿಯನ್ನು ಆಕಸ್ಮಿಕವಾಗಿ ಕಂಡ. ಅಗ್ನಿಯನ್ನು ದೀಪಗಳನ್ನಾಗಿಸಿದವನೂ ಬಲಿಯೇ! ನಮಗೀಗ ಮೂರು ದಿವಸ ಬಲಿಯೇ ಇಂದ್ರ. ಬಲಿಯ ಮನೆಯನ್ನು ಕಾಯುತ್ತಿದ್ದವ ವಿಷ್ಣು. ಈ ಮೂರು ದಿನವೂ ಬಲೀಂದ್ರನಿಗೆ ಪೂಜಿಸಿ, ಎಡೆಯಿಟ್ಟು, ವಿಶೇಷ ಖಾದ್ಯಗಳನ್ನು ಬಡಿಸುವರು. ಅದು ಬಲೀಂದ್ರನ ಪ್ರಸಾದವೆಂದು ಸ್ವೀಕರಿಸುವರು.
ವಿಷ್ಣುವು ವರಾಹಾವತಾರವನ್ನು ತಳೆದಾಗ, ಆತನ ದೇಹದಿಂದ ಬೆವರು ಭೂಮಿಯ ಮೇಲೆ ಬೀಳಲಾಗಿ, ಭೂದೇವಿಯಲ್ಲಿ ಜನಿಸಿದವನೇ ನರಕಾಸುರ. ಭೌಮಾಸುರ ಎನ್ನುವುದು ಅವನ ಇನ್ನೊಂದು ಹೆಸರು. [ಭಾ.ಸ.14.55] ಪ್ರಾಗ್ಙ್ಯೋತಿಷ ನಗರದ ರಾಜ. ಭೂದೇವಿಯು ಇವನು ಬಲದಿಂದ ಸಂಗ್ರಹಿಸಿದ ಅದಿತಿಯ ಕುಂಡಲ, ಇಂದ್ರನ ಛತ್ರ, ಮಣಿಪರ್ವತವನ್ನು ತಂದು ನರಕಾಸುರನ ಮಗನಾದ ಭಗದತ್ತನನ್ನೂ ಕರೆದು ಕೊಂಡುಬಂದು ಅಭಯವನ್ನು ಕೊಡಿಸಿದಳು. ಅವನು ಭೂದೇವಿಯ ಮಗನಾದುದರಿಂದ ನರಕಾಸುರನ ಪೂಜೆಯೂ ನಡೆಯುತ್ತದೆ.
ಶ್ರೀಲಕ್ಷ್ಮೀಪೂಜೆಯು ವಿಶೇಷವಾದುದು. ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಎಲ್ಲರೂ ಬಯಸುವರು! ವಿದ್ಯಾವಂತರು, ಕೃಷಿಕಾರರು, ಉದ್ಯೋಗಿಗಳು, ವ್ಯಾಪಾರಸ್ಥರು ಎಲ್ಲರೂ ‘ತಮ್ಮಲ್ಲಿ ಲಕ್ಷ್ಮೀಯು ಸ್ಥಿರವಾಗಿ ನಿಲ್ಲಲಿ’ ಎಂದು ಮಾಡವ ಆರಾಧನೆಯೇ ಲಕ್ಮೀ ಪೂಜೆ. ಕರ್ಮಾಂಗದಲ್ಲಿ ಎಲ್ಲ ಕರ್ಮಗಳಿಗೂ ವಿಸರ್ಜನೆಯಿದೆ. “ನಿನ್ನ ಸ್ವಸ್ಥಾನಕ್ಕೆ ಹೋಗು. ಮತ್ತೆ ಕರೆದಾಗ ಬಾ” ಎನ್ನುವ ಮಂತ್ರಗಳಿವೆ. ಆದರೆ ಲಕ್ಷ್ಮೀಗೆ ಮಾತ್ರ ವಿಸರ್ಜನಾ ಕ್ರಮವೇ ಇಲ್ಲ!!
ಆದ್ಯಂತರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |
ಯೋಗಜ್ಞೇ ಯೋಗಸಂಭೂತೇ ಮಹಾಲಕ್ಷ್ಮೀ ನಮೋಸ್ತುತೇ ||
ಸರ್ವರಿಗೂ ದೀಪಾವಳಿಯು ದೀರ್ಘವಾದ ಆಯುರಾರೋಗ್ಯವನ್ನು ನೀಡಲಿ. ಲಕ್ಷ್ಮೀಯ ಕೃಪೆಯಾಗಲಿ, ಸಂತೋಷ-ಸಮಾಧಾನ-ನೆಮ್ಮದಿ ಸದಾ ಇರಲಿ ಎಂದು ಭಗವಂತನಲ್ಲಿ ಕೋರುವ…
ನಿಮ್ಮವ
ಅನಂತ. ವೈದ್ಯ. ಯಲ್ಲಾಪುರ

No comments:
Post a Comment