ರಾಮನವಮಿ ಎಲ್ಲರಿಗೂ ಶುಭ ನೀಡಲಿ.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||
ದಶರಥನು ಎಂದು ರಾಮು, ಅಪ್ಪಿ, ಮುದ್ದು ಎಂದು ಕರೆಯುತ್ತಿರಲಿಲ್ಲ! ಸಾಯುವ
ವೇಳೇಯಲ್ಲಿಯೂ ರಾಮ, ರಾಮ ಎಂದು ಕರೆದವನು. ಕೌಸಲ್ಯೆಯು ತನ್ನ ‘ಋತುಪಂಚಮಿ’ ಮುಗಿದ ಮೇಲೆ ಜನಿಸಿದ
ಮಗನನ್ನು ಚಿನ್ನ, ಬಂಗಾರ ಎಂದು ಕರೆಯುತ್ತಿರಲಿಲ್ಲ. ‘ರಾಮಭದ್ರ’ ಎಂದೇ ಕರೆಯುತ್ತಿದ್ದಳು.
ಪ್ರಜೆಗಳು ಹುಣ್ಣಿಮೆಯ ಚಂದ್ರನಿಗೆ ಹೋಲಿಸುತ್ತಿದ್ದರು. ಕೆಲವರು ಶ್ರೀರಾಮನನ್ನು ಅಮಾವಾಸ್ಯೆಯ
ನಂತರದ ಬಿದಿಗೆಯ ಚಂದ್ರನಿಗೆ ಹೋಲಿಸುತ್ತಿದ್ದರು. ರಾಮನ ಬದುಕು ಚಂದ್ರನಂತೆಯೇ
ಏರಿಳಿಯಿದ್ದಿತ್ತು. ವಸಿಷ್ಠ, ವಿಶ್ವಾಮಿತ್ರರು ಅವನನ್ನು ‘ವೇಧಸೇ’ ಜ್ಞಾನಿ. ವಿಷ್ಣುವಿನ ಅವತಾರಿ
ಎಂದು ಕರೆಯುತ್ತಿದ್ದರು. ದಶರಥನು ರಾಮನನ್ನು ಯಜ್ಞರಕ್ಷಣೆಗೆ ಕಳುಹಿಸು ಎಂದಾಗ ಒಪ್ಪಿರಲಿಲ್ಲ! ಆಗ
ವಿಶ್ವಾಮಿತ್ರರು ‘ನಾನು ತಿಳಿದಿದ್ದೇನೆ. ವಸಿಷ್ಠರು ತಿಳಿದಿದ್ದಾರೆ’ ಎಂದು ದಶರಥನನ್ನು
ಒಪ್ಪಿಸುವರು. ‘ರಘುಕುಲಕ್ಕೇ ನಾಥ’ ಎಂದು ಶಬರಜ್ಜಿ, ಹನುಮಂತ, ಸುಗ್ರೀವ, ವಿಭೀಷಣ…
ಮುಂತಾದವರು ತಿಳಿದಿದ್ದರು. ಸೀತೆಯು ಗೌರವದಿಂದ ‘ನಾಥ’ ಎಂದು ಕರೆಯುತ್ತಿದ್ದಳು. ಜನಕನ
ಪ್ರಜೆಗಳು, ಇನ್ನಿತರ ದೇಶದವರು ‘ಸೀತಾಮಾತೆಯ ಯಜಮಾನ’ ಎನ್ನುತ್ತಿದ್ದರು. ಇದು ರಾಮಾಯಣದಲ್ಲಿ
ಎಲ್ಲಿಯೂ ಬರುವುದಿಲ್ಲ. ದಾಸವರೇಣ್ಯರ ಬಾರದೇ ಇರುವುದೂ ಇಲ್ಲ. ನಾವೆಲ್ಲ ‘ರಾಮದಾಸ’ರಲ್ಲವೇ?
ರಾಮ, ರಾಮಭದ್ರ, ರಾಮಚಂದ್ರ, ವೇಧಸೇ, ರಘುನಾಥ, ಸೀತಾಪತಿ ಎಂದು ಸಪ್ತಧಾ…
ಸಪ್ತಾಕ್ಷರಿ ಮಂತ್ರವೆಂದು ಗುರುತಿಸುವರು. ಸುಂದರಕಾಂಡವು ರಾಮಾಯಣದಲ್ಲಿಯೇ ಮಹತ್ವವಾದುದು.
“ನಷ್ಟದ್ರವ್ಯಾಸಿ ಲಾಭೋ ಹಿ ಸುಂದರಃ ಪರಿಕೀರ್ತಿತಃ”… ಕಳೆದ ಹೋದ
ವಸ್ತುವಿನ ಪುನಃಪ್ರಾಪ್ತಿ ಸುಂದರವೆನಿಸುತ್ತದೆ. ಪಂಚಾಕ್ಷರಿ ಮಂತ್ರದ ಎರಡನೆಯ ವರ್ಣ ‘ಮ’ವನ್ನು
ತೆಗೆದರೆ ನಃಶಿವಾಯ ಎಂದಾಗುವುದು. ಅಷ್ಟಾಕ್ಷರಿ ಮಂತ್ರದ ಎರಡನೆಯ ‘ರಾ’ವರ್ಣವನ್ನು ತೆಗೆದರೆ
ನ+ಅಯಣಾಯ = ಆಶ್ರಯವೇ ಇಲ್ಲ ಎಂದಾಗುವುದು. ‘ರಾ’, ‘ಮ’ ಎರಡೂ ಆ ಮಹಾಮಂತ್ರಗಳ ‘ಬೀಜಾಕ್ಷರ’ಗಳು.
‘ರಾಮ’ ಇಲ್ಲವೇ ‘ಮರಾ’ ಏನೆಂದು ಕರೆಯಿರಿ ಆ ಮಂತ್ರವನ್ನು ಕೆಡಿಸುವುದಕ್ಕೆ ಸಾಧ್ಯವಿಲ್ಲವೇ ಇಲ್ಲ.
‘ರಾಮನವಮಿ’ಯು ನಿಮಗೆಲ್ಲ ಸೌಲಭ್ಯ, ಸೌಜನ್ಯ, ಸೌಕುಮಾರ್ಯ, ಸೌಶೀಲ್ಯ, ಸೌಹಾರ್ಧ, ಸೌಮಾನಸ್ಯ,
ಸೌಂದರ್ಯಗಳನ್ನು ನೀಡಲಿ ಎಂದು ಶುಭಕೋರುವೆ.
ಸೌಂದರ್ಯಾದಿ ಸುಗುಣ ಅಲಂಕೃತನಾಗಿ ಸುರ-ನರ-ಅಸುರಲೋಕಗಳನ್ನು ಉದ್ಧರಿಸಲು ಬಂದ
ಶ್ರೀರಾಮನಿ ಜೈ ಎನ್ನಿ.
No comments:
Post a Comment